Monday 20 August 2012

ಅಮೇರಿಕ ಎಂಬ ಮಾಯಾ ನಗರಿ

ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್...  ಅಮೇರಿಕ ದ ರಸ್ತೆಗಳನ್ನು ನೋಡಿದಾಗ ಮೊದಲು ನೆನಪಾಗಿದ್ದು  ಈ ಹಾಡು. ಅಂದು ಮಧ್ಯಾಹ್ನ ಸುಮಾರು 12 ಘಂಟೆ. 23 ಘಂಟೆಗಳ ಪ್ರಯಾಣದ ನಂತರ, ಸಾನ್ ಫ್ರಾನ್ಸಿಸ್ಕೋ ವಿಮಾನನಿಲ್ದಾಣದಿಂದ (San Francisco airport) ಹೊರಗೆ ಬಂದಾಕ್ಷಣ ಮೊದಲು ಕಂಡಿದ್ದು ಅಮೆರಿಕ ದ ವಿಶಾಲವಾದ ರಸ್ತೆಗಳು ಮತ್ತು ಅದರಲ್ಲಿ ಚಲಿಸುವ ವೇಗದ ಕಾರುಗಳು.
ಕ್ಯಾಲಿಫೋರ್ನಿಯಾ ರಾಜ್ಯವನ್ನು ಅಮೇರಿಕ ಅನ್ನೋದಕ್ಕಿಂತ ಮತ್ತೊಂದು ಏಷಿಯಾ ಅಂತಾನೆ ಹೇಳಬಹುದು. ಇಲ್ಲಿ, ಎಲ್ಲಿ ನೋಡಿದರಲ್ಲಿ ಕಾಣುವವರು ಚೀನಿಯರು  ಮತ್ತು ಭಾರತೀಯರು. ಅದರಲ್ಲೂ, ನಾನಿದ್ದ ನಗರ ಸನ್ನಿವೇಲ್ (Sunnyvale), ಭಾರತೀಯರಿಗೆ ಹೇಳಿ ಮಾಡಿಸಿದ ಜಾಗ. ಮೊದಲೆರಡು ದಿನ ಬೇಸರದಿಂದಿದ್ದ ನಾನು ನಂತರ ಅಮೇರಿಕಾವನ್ನು ಮಾಯನಗರಿಯೆಂದು ಏಕೆ ಕರೆಯುತ್ತಾರೆಂದು ಅರಿವಾಗತೊಡಗಿತು. ಇಲ್ಲಿರುವ ವ್ಯವಸ್ಥೆಗಳನ್ನು ನೋಡಿದರೆ ಹರಪ್ಪನ್ ಕಾಲದಲ್ಲಿ ವರ್ಣಿತವಾದ ಭಾರತದ ನೆನಪಾಗುತ್ತದೆ.
ನೀಲಿ ಬಣ್ಣದ ಸಾಗರ, ನೀರಿನಲ್ಲಿ ಕಾಲಿಟ್ಟರೆ ಕೊರೆಯುವ ಛಳಿ, ಸುತ್ತಲು ಹಸಿರು ಬೆಟ್ಟಗಳು, ಅದಕ್ಕೆ ತಾಗಿ ಚಲಿಸುವ ಮೋಡಗಳು, ಸ್ವರ್ಗಕ್ಕೆ ಇಲ್ಲಿಂದ ಮೂರೇ ಗೇಣು ಎನಿಸುವಂತಹ ಮನಮೋಹಕ  ದೃಶ್ಯ. ಇದು ಅಮೇರಿಕಾದಲ್ಲಿ ನನ್ನ ಮೊದಲ ಪ್ರವಾಸ. ಪೆಸಿಫಿಕ್ ಹೈವೇ, ಪೆಸಿಫಿಕ್ ಸಾಗರದ ದಡದಲ್ಲೇ ಹಾದುಹೋಗುವ ಈ ರಸ್ತೆಯಲ್ಲಿ ಕಂಡುಬರುವ ಇಂತಹ ದೃಶ್ಯಗಳು ಮೈ ಬೆರಗುಗೊಳಿಸುತ್ತವೆ.




ನನ್ನ ಮುಂದಿನ ಪಯಣ ಸಾಗಿದ್ದು ಮಾನವನ ಸಾಧನೆಯನ್ನು ಎತ್ತಿ ಹಿಡಿಯುವಂತಹ ನಗರ. 1906 ರ ಭೀಕರ ಭೂಕಂಪದ ನಂತರ, ಛಿದ್ರ ಛಿದ್ರ ವಾಗಿದ್ದ ಭೂಮಿಯನ್ನು ಒಂದುಗೂಡಿಸಿ, ಅದಕ್ಕೊಂದು ಹೊಸ ರೂಪ ಕೊಟ್ಟು, ಮಾನವ ನಿರ್ಮಿಸಿದ  ನಗರವೇ ಸ್ಯಾನ್ ಫ್ರಾನ್ಸಿಸ್ಕೊ (San Francisco). ಕಲ್ಲು ಮಣ್ಣಿನಿಂದ ಸಮುದ್ರವನ್ನು ಹಿಂದಕ್ಕೆ ತಳ್ಳಿ, ಸಮುದ್ರದಲ್ಲಿ ಮುಳುಗಿದ್ದ ಭೂಮಿಯನ್ನು ಹೊರತೆಗೆದು, ಅಲ್ಲಿ ಈ ನಗರದ ಬಹುತೇಕ ಭಾಗಗಳನ್ನು ನಿರ್ಮಿಸಲಾಗಿದೆ. ವಾರಕ್ಕೆ 10ರಿಂದ 15ಬಾರಿ ಭೂಕಂಪವಾಗುವ ಈ ನಗರದಲ್ಲಿ, ಸಾವಿರಾರು ಗಿಡಗಳನ್ನು ನೆಟ್ಟು, ದೊಡ್ಡ ದೊಡ್ಡ ಕಾಡನ್ನು ಬೆಳೆಸಿ, ನೈಸರ್ಗಿಕ ರೀತಿಯಲ್ಲಿ ಭೂಮಿಯನ್ನು ಭೂಕಂಪದಿಂದ ಕಾಪಾಡಲಾಗುತ್ತಿದೆ.
 ಗೋಲ್ಡನ್ ಗೇಟ್ ಸೇತುವೆ 

 SFO tram
 alcatraz ಜೈಲು 
Russian Hill
SFO ನಗರದ ಅತಿ ಎತ್ತರವಾದ ಕಟ್ಟಡ

ಒಂದು ಕಡ್ಡಿಯನ್ನು 60 degree ಕೋನದಲ್ಲಿ ಇಟ್ಟು, ಕಡ್ಡಿಯ ಕೆಳಭಾಗದಲ್ಲಿ ಚೆಂಡನ್ನು ಇಟ್ಟರೆ, ಚೆಂಡು ಕೆಳಗಿನಿಂದ ಮೇಲಕ್ಕೆ ಬರುವುದೇ ಅಥವಾ ಕಡ್ಡಿಯ ಕೆಳಗಿನ ಭಾಗದಲ್ಲಿ ನೀರು ಹಾಕಿದರೆ, ನೀರು ಹರಿದು ಮೇಲೆ ಬರುವುದೇ?? ಇಂತಹ ಅಧ್ಭುತ ನಡೆಯುವ ಸ್ಥಳವೇ Mystery Spot (ರಹಸ್ಯ ಸ್ಥಳ). ಸಾಂತ ಕ್ರೂಸ್ (Santa Cruz) ಎಂಬ ನಗರದಲ್ಲಿರುವ ಈ ಸ್ಥಳವು ಬಹಳ ಜನಪ್ರಿಯ. ಈ ಸ್ಥಳದಲ್ಲಿನ ಗುರುತ್ವಾಕರ್ಷಣೆಯ ವ್ಯತ್ಯಾಸದಿಂದ ಹೀಗೆ ಆಗುತ್ತದೆ ಎಂದು ಕೆಲವರು ಹೇಳಿದರೆ ಮನುಷ್ಯನನ್ನು ಮೋಸದಿಂದ ಭ್ರಮಿಸಲಾಗುತ್ತಿದೆ ಎಂದೂ ಕೆಲವರು ಹೇಳುತ್ತಾರೆ (Visual Illusion). ಅದೇನೇ ಆಗಲಿ, ಈ ಸ್ಥಳ ಬಹಳ ಮಜಾ ಕೊಡುತ್ತದೆ :).




ಇದಲ್ಲದೆ ಹಲವಾರು ಬಗೆಯ ಹೂತೋಟಗಳು,  ಉದ್ಯಾನವನಗಳು, ವಿಶ್ರಾಂತಿ ಸ್ಥಳಗಳು ಎಲ್ಲಾ ನಗರಗಳಲ್ಲೂ ಕಂಡುಬರುತ್ತವೆ. ಇಲ್ಲಿರುವ ಸ್ವಚ್ಚತೆ, ಜೀವನ ಶೈಲಿ, ಜನರ ಪ್ರಾಮಾಣಿಕತೆ, ಶಿಸ್ತು ಕೊನೆಯದಾಗಿ ಡಾಲರ್ :) ಗಳನ್ನು ನೋಡಿ, ಹಲವು ಮಂದಿ ಇಲ್ಲೇ ಉಳಿದು ಬಿಡಲು ಬಯಸುತ್ತಾರೆ. ಆದರೆ ನನಗೆ ನಮ್ಮ ಬೆಂಗಳೂರಿನಷ್ಟು ಯಾವ ಊರೂ ಇಷ್ಟ ಆಗಲಿಲ್ಲ :). ಆದರೂ ಕೆಲವು ವರ್ಷ ಇದ್ದು $ ಸಂಪಾದನೆ ಮಾಡಲು ಕ್ಯಾಲಿಫೋರ್ನಿಯಾ ಸೂಕ್ತವಾದ ಸ್ಥಳ.

Tuesday 1 May 2012

ಜೀವನ ಒಂದು ಸಂಜೆ ಆಟ :)

ಸಂಜೆ ಸುಮಾರು 6 ಘಂಟೆ. ಇನ್ನೇನು laptop ತೆಗೆದು ಬಾಗ್ನಲ್ಲಿ ಇಡೋ ಅಷ್ಟರಲ್ಲಿ boss ಬಂದು ಕೇಳ್ತಾರೆ, ಒಂದು file ಕಳಿಸೋಕೆ ಹೇಳಿದ್ನಲ್ಲ  ಇನ್ನು ಬಂದಿಲ್ಲ ಅಂತ. ಅತ್ತ ಆ file ಇನ್ನು ready ಆಗಿಲ್ಲ ಅಂತ  ಬಾಸ್ ಗೆ ಹೇಳಕ್ಕೂ ಆಗ್ತಾ ಇಲ್ಲ  ಇತ್ತ  internals ಗೆ ಲೇಟ್ ಆಗ್ತಾ ಇದೆ ಅಂತ ಹೇಳೋಕೆ ಫೋನ್  ಮಾಡ್ತಾ ಇರೋ friend ಫೋನ್ ತೆಗೆಯೋಕು ಆಗ್ತಾ ಇಲ್ಲ...
ಏನಪ್ಪ ಕುಯ್ತಾ ಇದ್ದಾನೆ ಅನ್ಕೊಂತಿದ್ದೀರ,  ಈ  ಬ್ಲಾಗ್  ಪೋಸ್ಟ್ ಸ್ವಲ್ಪ ಹಾಗೇನೆ. ಇದು evening college students ನ  ದೈನಂದಿಕ ಕಥೆ ವ್ಯಥೆ :)

ಆರಾಮಾಗಿ ಸ್ಕೂಲ್ ಮುಗಿಸಿ, dipoloma ಮುಗಿಸಿ, ಕೆಲಸಕ್ಕೆ ಸೇರಿದಾಗ, life ಅಂದ್ರೆ ಏನು ಅಂತನು ಸರಿಯಾಗಿ ಗೊತ್ತಿರಲಿಲ್ಲ, life ನಲ್ಲಿ ಇಷ್ಟೆಲ್ಲಾ ಕಷ್ಟ ಪಡಬೇಕಾಗಬಹುದು ಅಂತನೂ ಅನ್ಕೊಂಡಿರ್ಲಿಲ್ಲ. ಅದೇನೋ ಅಂತಾರಲ್ಲ, ಕಷ್ಟಾನೆ ಪಡದೋನು ಸುಖ ಹೇಗೆ ಅನುಭವಿಸುತ್ತಾನೆ ಅಂತ. ಅದಕ್ಕಾದ್ರೂ ಕಷ್ಟ ಪಡಲೇ ಬೇಕಿತ್ತು ಅಂತ ಹೇಳಿ. 
Office friends ಜೊತೆ  ಮಾತಾಡಿ, CET-counselling ಅಂತ ಓಡಾಡಿ, ದುಡ್ಡು-loan  ಅಂತ ತಿರುಗಾಡಿ, ಹಾಗೋ ಹೀಗೋ ಸರ್ಕಸ್ ಮಾಡಿ ಆಫೀಸ್ ನಿಂದ permission ತೊಗೊಂಡು join ಆಗಿಯೇ ಬಿಟ್ಟೆವು "Evening college" ಗೆ.

ನಾನು ಹೇಳ್ತಾ ಇರೋದು BMS Evening college of engineering ಬಗ್ಗೆ. ಬಸವನಗುಡಿ (Bull temple road) ನಲ್ಲಿ ಇರೋ ಈ college ನಲ್ಲಿ, ಸಂಜೆ ಸುಮಾರು  6 ರಿಂದ ರಾತ್ರಿ 9-10 ರ ವರೆಗೆ ಕ್ಲಾಸ್ ಇರ್ತಿತ್ತು. ಶುರುವಿನಲ್ಲಿ ಎಲ್ಲರಿಗೂ college attend ಆಗೋ ಆಸೆ. ಆದ್ರೆ ಕೆಲಸ ಮುಗಿಸಿ college ಗೆ ಬರೋ ಅಷ್ಟರಲ್ಲಿ ಟೈಮ್ ಆಗಿಯೇ ಬಿಡುತ್ತಿತ್ತು. ಕೆಲವರು class ಮುಗಿಯೋಕೆ ಇನ್ನೇನು 5 ನಿಮಿಷ ಇದೆ ಅನ್ಬೇಕಾದ್ರೆ ಕ್ಲಾಸ್ ಗೆ ಬಂದ್ರೆ ಇನ್ನು ಕೆಲವರು ಹೊರಗಡೆ college ಗೇಟ್ ಹತ್ರ ಏನ್ ಮಗಾ class ಆಗಿ ಹೋಯ್ತಾ ಅಂತ ಸಿಗ್ತಿದ್ರು. ಬೆಳಗ್ಗೆ 6 ಘಂಟೆಗೆ ಶುರುವಾದ ದಿನ ಮುಗಿಯುತ್ತಿದ್ದದು ರಾತ್ರಿ 11 ಘಂಟೆಗೆ. exam ಏನಾದ್ರು ಬಂತಂದ್ರೆ ನಿದ್ದೆಗೆ full stop. ಒಮ್ಮೆ ಒಬ್ಬರ ಮುಖ  ನೋಡಿದಮೇಲೆ ಮತ್ತೆ ಅವರು ಕಾಣಿಸ್ತಾ ಇದ್ದದ್ದು ಒಂದು ಅಥವಾ ಎರಡು ವಾರದ ನಂತರಾನೆ ಅಥವಾ ನೇರ exam hall ನಲ್ಲೆ. College ನಲ್ಲಿ ಯಾರು ಯಾರು ಇದ್ದಾರೆ ಅಂತ ತಿಳ್ಕೊಳೋಅಷ್ಟರಲ್ಲೇ ಒಂದು semester ಮುಗಿದು ಹೋಗಿತ್ತು.

ಶನಿವಾರ ಬಂತಂದ್ರೆ college ಗೆ ಹೋಗೋಕೆ ಏನೋ ಒಂಥರಾ ಖುಷಿ, Day college ಅವರನ್ನ ನೋಡಬಹುದಲ್ಲ ಅದಕ್ಕೆ ;). ಕೆಲವೊಮ್ಮೆ day college students ನ ನೋಡಿ, ನಾವು ಇದನ್ನೆಲ್ಲಾ miss ಮಾಡ್ಕೊಂತ ಇದ್ದಿವಲ್ಲ ಅಂತ ಬೇಸರವಾದ್ರೆ,  ಮತ್ತೊಮ್ಮೆ, ಇವರ age ನಲ್ಲಿ ನಾವು ಇವರಿಗಿಂತ responsible ಆಗಿದ್ದೀವಿ ಅಂತ ಎದೆ ಉಬ್ಬುತ್ತಿತ್ತು. college ಮುಗಿದಮೇಲೆ ಕೆಲಸ ಹುಡುಕ ಬೇಕು ಅನ್ನೋ tension ಅಂತು ಇರಲಿಲ್ಲ, tension ಇದ್ದಿದ್ದಂದ್ರೆ college ಹೇಗೆ ಮುಗಿಸೋದು ಅಂತ :D. ಹೇಗೋ ಒದ್ದಾಡಿ 3 ವರ್ಷದ college ಎಂಬ ಜೈಲು ಶಿಕ್ಷೆ ಮುಗಿಸಿ ಬಿಟ್ಟೆವು.

ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ. ತಮ್ಮದೇ ರೀತಿಯ ನಮಸ್ಯೆಯಿಂದ, college ಗೆ ಹೋಗೋ ಸಮಯದಲ್ಲಿ ಕೆಲಸಕ್ಕೆ ಸೇರಿ, ಜವಾಬ್ದಾರಿಯನ್ನ  ತಲೆ ಮೇಲೆ ಹೊತ್ಕೊಂಡು, professional life ಎಂಬ ಬಾವಿಗೆ ಬಿದ್ದು, ಒದ್ದಾಡಿ ಈಜಾಡಿ ಮೇಲೆದ್ದು ಇವಿನಿಂಗ್ college ನಲ್ಲಿ engineering ಮುಗಿಸಿದವರಿಗೆ ನನ್ನದೊಂದು ದೊಡ್ಡ ಸೆಲ್ಯೂಟ್ :).


ಬಸವನಗುಡಿಯ ಕಡಲೆಕಾಯಿ ಪರಶೆ, ಕ್ಲಾಸ್ ಮುಗಿದ ಮೇಲೆ college ಗ್ರೌಂಡ್ ನಲ್ಲಿ ಕ್ರಿಕೆಟ್ ಆಡೋದು, ಕ್ಲಾಸ್ ನಲ್ಲಿ ಕುತ್ಕೊಂಡು ಆಫೀಸ್ ಬಗ್ಗೆ ಮಾತಾಡೋದು, college ಹತ್ರ ಬಸ್ಸಿಂದ ಇಳಿದು ಹಳ್ಳಿ ತಿಂಡಿಯಲ್ಲಿ ತಿಂಡಿ ತಿಂದು ಹಾಗೆ ಮನೆಗೆ ಹೋಗಿ ಬಿಡೋದು, semester ಮುಗಿದಕೂಡಲೇ trekking ಹೋಗೋದು, ಇದನ್ನೆಲ್ಲಾ ಎಂದಿಗೂ ಮರೆಯೋಕಾಗಲ್ಲ. ಇಂದು ಎಲ್ಲರು ಲೈಫ್ ನಲ್ಲಿ settle ಆಗಿ ಜೀವನವೆಂಬ ಹೋರಾಟದಲ್ಲಿ ಗೆದ್ದಿದ್ದಾರೆ. ಈ ಬ್ಲಾಗನ್ನು ನನ್ನ ಎಲ್ಲ evening college ಸ್ನೇಹಿತರಿಗಾಗಿ dedicate ಮಾಡ್ತೀನಿ  :) .



Friday 6 April 2012

Brahmagiri the land of mystery !!!

A gang of 7 walking down the hill, all tired, exhausted and a feeling that some body is observing their movements. It's a hot summer day and it's much expected that the forest animals would be resting under the shade and waiting for the easy targets for their meal. A large forest, with no hint of any human existence, miles and miles of dry grass land and a foot steps and body marks of elephants and big cats!!!. Returning back from forest, they are nearing to a big black hole naturally formed by a bunch of trees in the banks of the stream, a perfect location for animals to hide. This is the only way back to return from the forest. They are stepping towards the black hole with slight hesitation and fear and all of a sudden, a person moving ahead, turns back with his eyes wide open and screams, RUN RUN!!!!

Six of us gathered, as enthusiastic as ever, with enough food and water for 2 days and left to the border of coorg (Kodagu, Karnataka), a place called "Srimangala (ಶ್ರೀ ಮಂಗಲ)". This time our destination was "Brahmagiri",  a hill which divides Coorg and Waynad.

Left from satellite bus stand Bangalore, reached Gonikopal (coorg) and to "Srimangala" (Coorg) through a local bus. As usual, went to a small road side hotel (which is the only hotel we got in Srimangala :D ), ate like a pig, took permission from Srimangala forest range officer and left to "Irpu" falls by hiring a jeep.



Had hell of an enjoyment in the cold Lakshmana Tirtha river and started walking towards the Narimale forest camp, with a guide. Narimale forest camp is a rest point after 1st day trekking, built by the forest department for Karnataka in the middle of the forest. As like any trekking, path was mixture of dense forest, rocky land and a dry grass land. A bunch of trees of different colors in the banks of the streams were amazing to see.

Reached, Narimale forest camp, did some cooking, played cricket and called a day. We made sure all the chairs and other things are kept inside the camp as the camp surroundings are favorite spot for elephants in the night :). 1st day of trekking was little smoother, guide was looking little tired through as we made him rest less and walk more :D :D.








 Its around 5:30 in the morning, started getting up slowly one by one and getting ready to reach the land of mystery. Filled up all the water bottles, carried breakfast and lunch and started moving up at around 7 AM. We carried only one bag (rest of all bags were in camp) which was obviously a point of conflict as who is going to carry that bag, finally as suggested by CR, we agreed to carry that on time sharing basis :D.



As we moved ahead, we started getting a feel of jungle. miles and miles of grass land, a complete silence, and a feel of some body's presence but cant see them in reality. As we were moving we could see a fresh elephant  dung, body marks of elephants on the dry grass, grass is getting unfolded as if elephants just moved away from that place.Movement of some animals in the shadow of trees, but cant see any thing when you reach that place. We were highly cautions throughout the path.








 After walking for nearly 3 hours, finally, guide pointed us to the hill and said "This is the tip of Brahmagiri", left side of the hill is Kerala (Waynad) and right side is Karnataka (Coorg).   It was quiet surprising to see a border being created exactly in the middle of the hill, marking a state boundary.



Again a feel of touching the clouds. We were finally on the tip of brahmagiri, after walking through a hard path close to 80 deg vertical, yet another accomplishment of successfully reaching the target :). The hill top was chill and the wind was blowing heavily. We were certainly in a place which is worth putting so much effort to reach.






The fear of getting lost!!!!!
It was a beautiful bunch of trees of different colors just looking like a flower bouquet from far. That's the beauty of nature, any thing is possible in nature, thought in ourselves. It was so beautiful that we felt its calling us to go through it. Guide had also told us earlier that if you descend that way, it's little easy path, but be careful!!!. We were descending down and 4 of us decided we will take a little deviation and come through a bouquet of trees. Ravi and Manju went back in the same path from where we claimed up, like a good boys. Me, CR, Basanth and Shiva started walking  through a deviation. We just wanted to take a slight left from the hill, reach the middle of those bunch of trees, then take right and join the same path we came from. The plan was perfect, but, nature played its game in execution. Instead of taking slight left, we just moved little more and guess what, we were lost!!!!.
At some point of time, we thought we will go back and go in the same way, but when we turned back, we could'nt see any path. We were confused which way to go back. That's is the first time we had a fear of getting lost in jungle. We have seen lot of cases of people getting lost in jungle, some lucky ones get back and some get lost for ever!!. We gathered and decided lets just take a right side route and keep moving to the right. We started to do so, as were moving, the length of the bushes were increasing. There are so many holes in the land, some times our foot and ankle were getting stuck in the holes. The bushes were really thick and the length of bushes were atleast 5 feet long. The density of bushes was so much that we couldnt even see where our foot is getting stuck. These are the holes that snakes live in and these are the bushes that leopard uses to hide and attach deer. Prior reaching this place, we had seen some deers walking around this place. So the existence of leopards are quiet common. Four of us said just one thing, God nature, please save us this time, we would never take short cut again :( .

All of a sudden, we could hear Ravi and Manju's voice screaming and giving some signal. We thought, thank you mother nature, you heard us :). We could some how cross the bushes and reach the correct way. Every thing you see and experience in trekking is a lesson for your life. So, we decided, now on, we should think twice before taking a shortcut :).
This is not a happy ending. We are still in the middle of forest and lots of challenges to face till we go back.

As we moved ahead, we are nearing to a black hole naturally formed by a bunch of trees. We were moving in a line, CR in the front, followed by us (including guide), suddenly CR stopped and screamed, Run Run!!. You know the result of scaring a person who is already scared. We just started running back in all directions. Ravi to a small hill to the right, Me, Basanth on a small hill to the left, Shiva and guide straight backwards followed by CR. At that moment no body knew why we are running, all in our mind was just to run. After running for some distance, we all stopped and asked CR, why are we running??.
Was it an illusion, was it a golden deer, was it some snake or animal drinking water in the stream or just one more mystery of Brahmagiri. CR explained us later that he saw a movement of some big animal near the stream. None of us had guts to check what really it was, as we had already seen the result of going against the nature and we just moved away.
traveled back to irpu, SriMangala and to Bangalore.

Brief info of trek:
Bangalore to Gonikopal  - Around 232 KM.
Gonikopal to SriMangala - Around 1 Hour journey.
SriMangala to Irpu - Around 15 min in Jeep.
Trek distance: Around 35 to 40 KM.


Saturday 24 March 2012

ಮೂರು ಮಂದಿಯ ಹುಚ್ಚು ಪಯಣ

ಸುಮಾರು ಒಂದು ವರ್ಷದ ಹಿಂದಿನ ಕಥೆ. ಅದು ಮಳೆಗಾಲದ ಸಮಯ. ಬಹಳಷ್ಟು ಚಿಂತಿಸಿದ ನಂತರ, ಏನೇ ಆಗಲಿ ಈ ಬಾರಿ ಮಲೆನಾಡಿನ ಮಡಿಲಿಗೆ ಹೋಗಲೇ ಬೇಕೆಂದು ನಿರ್ಧರಿಸಿದ್ದೆವು. ಅದು ಆಗ ಬಹಳಷ್ಟು ಚರ್ಚೆಯಲ್ಲಿದ್ದ ತಾಣ. ಎಂದಿನಂತೆ, ಎಲ್ಲಾ ಸ್ನೇಹಿತರಿಗೆ ಇಮೇಲ್ ನಲ್ಲಿ ಸಂದೇಶ ಹೊರಡಿಸಿದ್ದೆವು. ಕೆಲವರು ಕೆಲಸದ ಕಾರಣದಿಂದ ತಪ್ಪಿಸಿಕೊಂಡರೆ ಕೆಲವರಿಗೆ ಮಲೆನಾಡಿನ ಮಳೆಗಾಲದ ಭೀತಿಯಿತ್ತು. ಕೊನೆಗೆ ಉಳಿದಿದ್ದು ಮೂರು ಮಂದಿ. ನಾನು, Fast and Furious ಲೋಕಿ ಮತ್ತು Comedy king ರವಿ.
ಶುಕ್ರವಾರದಂದೆ ನಾನು ಮತ್ತು ಲೋಕಿ ರಜ ಹಾಕಿ, ಒಬ್ಬ ಸ್ನೇಹಿತೆಯ ಗೃಹಪ್ರವೇಶ ಮುಗಿಸಿ, ಟ್ರೆಕ್ಕಿಂಗ್ ಶಾಪಿಂಗ್ ಮಾಡಲು ಹೊರಟೆವು. ಒಂದು ದೊಡ್ಡ ಹಗ್ಗ, ಮಳೆಯಿಂದ ರಕ್ಷಿಸುವ ಪ್ಲಾಸ್ಟಿಕ್ ಶೀಟ್, ಟ್ರಾಕ್ ಸ್ಯೂಟ್ ಮತ್ತು ಇನ್ನಿತರ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ಹಿಂದಿರುಗಿದೆವು. ಅತ್ತ ರವಿ ಕೆಲಸದಲ್ಲಿ ನಿರತನಾಗಿ ಮೊಬೈಲ್ನಿಂದಲೇ ನಮ್ಮೊಂದಿಗೆ ಸಂಪರ್ಕದಲ್ಲಿದ್ದ.
ಕೊನೆಗೂ ರಾತ್ರಿ ೧೦ ಘಂಟೆ ಆಗೇ ಹೋಯಿತು. ಮೂರೂ ಮಂದಿ ತುಮಕೂರು ರಸ್ತೆಯಲ್ಲಿ ಬಸ್ ಗಾಗಿ ಕಾಯುತ್ತಿದ್ದೆವು. ಅಂದು ನಮ್ಮ ಪಯಣ ಸಾಗುತ್ತಿದ್ದುದು  ಸಕಲೇಶಪುರದ ಕಡೆಗೆ.
ಶುಕ್ರವಾರ ರಾತ್ರಿಯಾದ್ದರಿಂದ ಎಲ್ಲ ಬಸ್ ಗಳು full ಆಗಿದ್ದವು. ಕೊನೆಗೆ ಮೂರೂ ಸೀಟ್ ಇದ್ದ ಹಾಸನದ ಬಸ್ ಹತ್ತಿ ಹಾಸನಕ್ಕೆ ಹೊರಟೆವು. ಎಂದಿನಂತೆ ನಮಗೆ ಸಿಕ್ಕಿದ್ದು ಕೊನೆಯ ಮೂರೂ ಸೀಟ್!!!!!.




ಹಾಸನದಲ್ಲಿ ಸ್ವಲ್ಪ ಸಮಯ ಕಾದ ನಂತರ ಸಕಲೇಶಪುರಕ್ಕೆ ಬೇರೆ ಬಸ್ ಸಿಕ್ಕಿತು. ಸಕಲೆಶಪುರದದಿಂದ ಸ್ವಲ್ಪ ಮುಂದೆ, ಶಿರಾಡಿ ಘಾಟಿ ಶುರು ಆಗವ ಸ್ವಲ್ಪ ಮೊದಲು ಇಳಿದೆವು.
ಝುಳು ಝುಳು ಹರಿಯುವ ನದಿ, ಹಸುರಿನ ಯವ್ವನದಿಂದ ಮೆರೆಯುತ್ತಿದ್ದ ಮಲೆನಾಡು, ಕಾಡು ಮೇಡು, ರಸ್ತೆಯಲ್ಲಿ ದನಕರುಗಳ ಓಡಾಟ, ಅಬ್ಬ ನೋಡಲಿಕ್ಕೆ ಎರಡು ಕಣ್ಣು ಸಾಲದು ಎನಿಸುತ್ತಿತ್ತು. ಅಲ್ಲೇ ಒಂದು ಸಣ್ಣ tea shop ನ ಪಕ್ಕದಲ್ಲಿದ್ದ ಸಣ್ಣ water falls ನಲ್ಲಿ ಮುಖ ತೊಳೆದು,  ಟೀ ಕುಡಿದು ಮುಂದೆ ನಡೆದೆವು.




ಇಲ್ಲಿಂದ ನಮ್ಮ ಪಯಣ ಸಾಗಿದ್ದು "ದೋಣಿಗಲ್" ರೈಲ್ವೆ ನಿಲ್ದಾಣದ ಕಡೆಗೆ ಮತ್ತು ನಮ್ಮ "Target" "ಎಡಕುಮರಿ". ಅಂದರೆ ನಮ್ಮ plan ಇದ್ದದ್ದು ದೋಣಿಗಲ್ ನಿಂದ ಎಡಕುಮರಿ ವರೆಗೆ ಕಾಲು ನಡಿಗೆ ಅದೂ ರೈಲ್ವೇ ಹಳಿಯ ಮೇಲೆ!!!.





ನಿರಂತರ ಮಳೆಯಿಂದ ರೈಲ್ವೇ ಹಳಿಯೆಲ್ಲ ಸ್ವಚ್ಚವಾಗಿತ್ತು. ಇದರಮೇಲೆ ನಡೆಯೋದೇ ಒಂದು ಥರಾ ಮಜಾ :). ಸ್ವಲ್ಪ ದೂರ ಸಾಗಿದ ನಂತರ ಒಂದು ಸಣ್ಣ ಗುಡಿಸಲು ಸಿಕ್ಕಿತು. ಇದೇ ಬೆಳಗಿನ ತಿಂಡಿಗೆ ಸರಿಯಾದ ಜಾಗ ಎಂದು ಕುಳಿತುಬಿಟ್ಟೆವು.


ಎಲ್ಲಿ ನೋಡಿದರಲ್ಲಿ ಹಸಿರು, ಆಗಾಗ ಬರುವ ತುಂತುರು ಮಳೆ, ಹಕ್ಕಿಯ ಚಿಲಿಪಿಲಿ, ಅಲ್ಲಲ್ಲಿ ಸಿಗುವ ಸಣ್ಣ ಪುಟ್ಟ ಮಳೆಗಾಲದ  ಜಲಧಾರೆಗಳು, ಜನಜಂಗುಳಿಯಿಲ್ಲದ ಸ್ವಚ್ಛ ಪ್ರದೇಶ, ಅಬ್ಬ ಸ್ವರ್ಗಕ್ಕೆ ಮೂರೇ ಗೇಣು ಅನಿಸುವ ಭಾವನೆ.  ಅಲ್ಲೇ ಸ್ವಲ್ಪ ದೊಡ್ಡ ಜಲಧಾರೆ ನೋಡಿ ಸ್ನಾನಕ್ಕೆ ಹೊರಟೆವು.



ಆಗಾಗ ಸಿಗುತ್ತಿದ್ದ ಗುಹೆಗಳನ್ನು ನೋಡುವುದು ಮತ್ತು ಅದರ ಮೂಲಕ ಸಾಗುವುದೇ ಮೈ ರೋಮಾಂಚನ ಗೊಳಿಸುವ ಸಂಗತಿ. ಕೆಲವು ಗುಹೆಗಳು ಸಣ್ಣದಾಗಿದ್ದು ಮತ್ತೆ ಕೆಲವು ಬಹಳ ಉದ್ದನೆಯದಾಗಿದ್ದವು. ಗುಹೆಯ ಒಳಗೆ ಹೋದಂತೆ ಮನಸ್ಸಿನಲ್ಲಿ ಇಲ್ಲಸಲ್ಲದ ಪ್ರಶ್ನೆಗಳು; ಗುಹೆಯಲ್ಲಿ  ಹಾವುಗಳಿದ್ದರೆ, ಅದನ್ನು ನಾವು ಮೆಟ್ಟಿದರೆ, ಗುಹೆಯಲ್ಲಿ ಯಾವುದಾದರು ಕಾಡುಪ್ರಾಣಿಗಳಿದ್ದರೆ, ನಾವು ಗುಹೆಯಲ್ಲಿದ್ದಾಗ ರೈಲು ಬಂದುಬಿಟ್ಟರೆ, ಅಬ್ಬಾ ನೂರಾರು ಪ್ರಶ್ನೆಗಳು. ಅತಿ ದೊಡ್ಡ ಗುಹೆ ಇದ್ದದ್ದು ೯೦೦ ಮೀಟರ್ ನಷ್ಟು. ನಮ್ಮಲ್ಲಿದ್ದ ಒಂದು ಟಾರ್ಚ್ ಕೂಡ ಅರ್ಧದಾರಿಯಲ್ಲಿ ಕೈಕೊಟ್ಟಿತ್ತು. ಇನ್ನೇನು ೮೦೦ ಮೀಟರ್ ನಷ್ಟು ದೂರ ತಲುಪಿದ್ದೆವು. ಬಂತು ನೋಡಿ ರೈಲಿನ ಶಬ್ದ!!!!!.






ಜೀವ ಉಳಿದರೆ ಸಾಕು, ಹಾವೋ ಚೇಳೋ ಎಂದು ಲೆಕ್ಕಿಸದೆ, ಶ್ರೀ ಸುಭ್ರಮಣ್ಯನ ಹೆಸರು ಹೇಳಿ ಓಡಿದೆವು ನೋಡಿ. ಒಂದು ಸಣ್ಣ ಮೊಬೈಲ್ ಟಾರ್ಚ್ ನ ಸಹಾಯದಿಂದ ಮೂರೂ ಮಂದಿ ಓಡಿ, ಗುಹೆಯ ಇನ್ನೊಂದು ಬದಿಯ ಬಾಗಿಲು ಬಂದಂತೆ ಬದಿಯಲ್ಲಿ ಜಿಗಿದೆವು. ಕೆಲವು ಸೆಕೆಂಡ್  ಗಳ ಅಂತರದಲ್ಲೇ ರೈಲು ಬಂತು. ಮೂರೂ ಮಂದಿ ಒಬ್ಬರ ಮುಖವನ್ನೂಬರು ನೋಡುತ್ತಾ ಹೇಳಿದ್ದಿ ಒಂದೇ ಮಾತು. "Just miss maga". ಆಗ ನಕ್ಕ ನಗು ಇನ್ನೂ ನನ್ನ ಕಿವಿಯಲ್ಲಿದೆ :).
ಮಳೆಗೆ ಲೆಕ್ಕಿಸದೆ ದಾರಿಯಲ್ಲಿ ಸಣ್ಣ ತೋಡಿನ ತೀರದಲ್ಲಿ ಊಟಮುಗಿಸಿ ಯಡಕುಮರಿಯ ಕಡೆಗೆ ಪಯಣ ಮುಂದುವರೆಸಿದೆವು. ಸುಮಾರು ೨೦ ಕಿಲೋಮೀಟರ್ ನಷ್ಟು, ರೈಲ್ವೆ ಹಳಿಯ ಮೇಲೆ ಸಾಗಿದ ನಂತರ ಬಂದೇ ಬಿಟ್ಟಿತು "ಎಡಕುಮರಿ".





ಅಲ್ಲಿ ಹೋಗುವಷ್ಟರಲ್ಲಿ ಅರ್ಧ ಜೀವ ಮುಗಿದಿತ್ತು. ಅಲ್ಲೇ ಒಬ್ಬ ರೈಲ್ವೆ ಕಾರ್ಮಿಕನ ಮನೆಯಲ್ಲಿ ಉಳಿದು, ಅಡುಗೆ ಮಾಡಿ, ತಿಂದು, ಮಲಗಿದೆವು. ಬೆಳಗ್ಗೆ 3 ಘಂಟೆಗೆ Alarm fix ಆಗಿತ್ತು. ಅಂದು ಆಗಸ್ಟ್ ೧೫. ಸ್ವಾತಂತ್ರ ದಿನೊತ್ಸವ. ಬೆಳಗ್ಗೆ ಮೂರಕ್ಕೆ ಎದ್ದು ನಾನು ಮತ್ತು ಲೋಕಿ ರೈಲ್ವೆ ನಿಲ್ದಾಣದ ಬದಿಯಲ್ಲೇ ನಾವು ತೆಗೆದುಕೊಂಡುಹೋಗಿದ್ದ flag ನಿಂದ "Flag Hosting" ಮಾಡಿದೆವು :). ಅಲ್ಲಿಂದ 3:30 AM ನ ರೈಲು ಹಿಡಿದು ಕುಕ್ಕೆಸುಭ್ರಮಣ್ಯ ತಲುಪಿದೆವು.
ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ,  ಶ್ರೀ ಸುಭ್ರಮಣ್ಯನ ದರ್ಶನ ಪಡೆದು, ಬೆಂಗಳೂರಿನತ್ತ ಹೊರಟೆವು.




 




ಈಗ ಈ ಜಾಗಕ್ಕೆ ಹೋಗಲು ನಿಷೇದಾಜ್ಞೆ ಇದೆಯಂತೆ. ಇಂಥದ ಪ್ರದೇಶವನ್ನು ನೋಡಲು ಅವಕಾಶ ಸಿಕ್ಕ ನಮ್ಮನ್ನು ನಾವು ಪುಣ್ಯವಂತರೆಂದು ಭಾವಿಸುತ್ತೇವೆ. ಇಂತಹ ಜಾಗಕ್ಕೆ ಹೋಗಿ ಕಳೆದ ಕ್ಷಣಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ :).