ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್... ಅಮೇರಿಕ ದ ರಸ್ತೆಗಳನ್ನು ನೋಡಿದಾಗ ಮೊದಲು ನೆನಪಾಗಿದ್ದು ಈ ಹಾಡು. ಅಂದು ಮಧ್ಯಾಹ್ನ ಸುಮಾರು 12 ಘಂಟೆ. 23 ಘಂಟೆಗಳ ಪ್ರಯಾಣದ ನಂತರ, ಸಾನ್ ಫ್ರಾನ್ಸಿಸ್ಕೋ ವಿಮಾನನಿಲ್ದಾಣದಿಂದ (San Francisco airport) ಹೊರಗೆ ಬಂದಾಕ್ಷಣ ಮೊದಲು ಕಂಡಿದ್ದು ಅಮೆರಿಕ ದ ವಿಶಾಲವಾದ ರಸ್ತೆಗಳು ಮತ್ತು ಅದರಲ್ಲಿ ಚಲಿಸುವ ವೇಗದ ಕಾರುಗಳು.
ಕ್ಯಾಲಿಫೋರ್ನಿಯಾ ರಾಜ್ಯವನ್ನು ಅಮೇರಿಕ ಅನ್ನೋದಕ್ಕಿಂತ ಮತ್ತೊಂದು ಏಷಿಯಾ ಅಂತಾನೆ ಹೇಳಬಹುದು. ಇಲ್ಲಿ, ಎಲ್ಲಿ ನೋಡಿದರಲ್ಲಿ ಕಾಣುವವರು ಚೀನಿಯರು ಮತ್ತು ಭಾರತೀಯರು. ಅದರಲ್ಲೂ, ನಾನಿದ್ದ ನಗರ ಸನ್ನಿವೇಲ್ (Sunnyvale), ಭಾರತೀಯರಿಗೆ ಹೇಳಿ ಮಾಡಿಸಿದ ಜಾಗ. ಮೊದಲೆರಡು ದಿನ ಬೇಸರದಿಂದಿದ್ದ ನಾನು ನಂತರ ಅಮೇರಿಕಾವನ್ನು ಮಾಯನಗರಿಯೆಂದು ಏಕೆ ಕರೆಯುತ್ತಾರೆಂದು ಅರಿವಾಗತೊಡಗಿತು. ಇಲ್ಲಿರುವ ವ್ಯವಸ್ಥೆಗಳನ್ನು ನೋಡಿದರೆ ಹರಪ್ಪನ್ ಕಾಲದಲ್ಲಿ ವರ್ಣಿತವಾದ ಭಾರತದ ನೆನಪಾಗುತ್ತದೆ.
ನೀಲಿ ಬಣ್ಣದ ಸಾಗರ, ನೀರಿನಲ್ಲಿ ಕಾಲಿಟ್ಟರೆ ಕೊರೆಯುವ ಛಳಿ, ಸುತ್ತಲು ಹಸಿರು ಬೆಟ್ಟಗಳು, ಅದಕ್ಕೆ ತಾಗಿ ಚಲಿಸುವ ಮೋಡಗಳು, ಸ್ವರ್ಗಕ್ಕೆ ಇಲ್ಲಿಂದ ಮೂರೇ ಗೇಣು ಎನಿಸುವಂತಹ ಮನಮೋಹಕ ದೃಶ್ಯ. ಇದು ಅಮೇರಿಕಾದಲ್ಲಿ ನನ್ನ ಮೊದಲ ಪ್ರವಾಸ. ಪೆಸಿಫಿಕ್ ಹೈವೇ, ಪೆಸಿಫಿಕ್ ಸಾಗರದ ದಡದಲ್ಲೇ ಹಾದುಹೋಗುವ ಈ ರಸ್ತೆಯಲ್ಲಿ ಕಂಡುಬರುವ ಇಂತಹ ದೃಶ್ಯಗಳು ಮೈ ಬೆರಗುಗೊಳಿಸುತ್ತವೆ.
ನನ್ನ ಮುಂದಿನ ಪಯಣ ಸಾಗಿದ್ದು ಮಾನವನ ಸಾಧನೆಯನ್ನು ಎತ್ತಿ ಹಿಡಿಯುವಂತಹ ನಗರ. 1906 ರ ಭೀಕರ ಭೂಕಂಪದ ನಂತರ, ಛಿದ್ರ ಛಿದ್ರ ವಾಗಿದ್ದ ಭೂಮಿಯನ್ನು ಒಂದುಗೂಡಿಸಿ, ಅದಕ್ಕೊಂದು ಹೊಸ ರೂಪ ಕೊಟ್ಟು, ಮಾನವ ನಿರ್ಮಿಸಿದ ನಗರವೇ ಸ್ಯಾನ್ ಫ್ರಾನ್ಸಿಸ್ಕೊ (San Francisco). ಕಲ್ಲು ಮಣ್ಣಿನಿಂದ ಸಮುದ್ರವನ್ನು ಹಿಂದಕ್ಕೆ ತಳ್ಳಿ, ಸಮುದ್ರದಲ್ಲಿ ಮುಳುಗಿದ್ದ ಭೂಮಿಯನ್ನು ಹೊರತೆಗೆದು, ಅಲ್ಲಿ ಈ ನಗರದ ಬಹುತೇಕ ಭಾಗಗಳನ್ನು ನಿರ್ಮಿಸಲಾಗಿದೆ. ವಾರಕ್ಕೆ 10ರಿಂದ 15ಬಾರಿ ಭೂಕಂಪವಾಗುವ ಈ ನಗರದಲ್ಲಿ, ಸಾವಿರಾರು ಗಿಡಗಳನ್ನು ನೆಟ್ಟು, ದೊಡ್ಡ ದೊಡ್ಡ ಕಾಡನ್ನು ಬೆಳೆಸಿ, ನೈಸರ್ಗಿಕ ರೀತಿಯಲ್ಲಿ ಭೂಮಿಯನ್ನು ಭೂಕಂಪದಿಂದ ಕಾಪಾಡಲಾಗುತ್ತಿದೆ.

ಗೋಲ್ಡನ್ ಗೇಟ್ ಸೇತುವೆ
SFO tram
alcatraz ಜೈಲು
ಒಂದು ಕಡ್ಡಿಯನ್ನು 60 degree ಕೋನದಲ್ಲಿ ಇಟ್ಟು, ಕಡ್ಡಿಯ ಕೆಳಭಾಗದಲ್ಲಿ ಚೆಂಡನ್ನು ಇಟ್ಟರೆ, ಚೆಂಡು ಕೆಳಗಿನಿಂದ ಮೇಲಕ್ಕೆ ಬರುವುದೇ ಅಥವಾ ಕಡ್ಡಿಯ ಕೆಳಗಿನ ಭಾಗದಲ್ಲಿ ನೀರು ಹಾಕಿದರೆ, ನೀರು ಹರಿದು ಮೇಲೆ ಬರುವುದೇ?? ಇಂತಹ ಅಧ್ಭುತ ನಡೆಯುವ ಸ್ಥಳವೇ Mystery Spot (ರಹಸ್ಯ ಸ್ಥಳ). ಸಾಂತ ಕ್ರೂಸ್ (Santa Cruz) ಎಂಬ ನಗರದಲ್ಲಿರುವ ಈ ಸ್ಥಳವು ಬಹಳ ಜನಪ್ರಿಯ. ಈ ಸ್ಥಳದಲ್ಲಿನ ಗುರುತ್ವಾಕರ್ಷಣೆಯ ವ್ಯತ್ಯಾಸದಿಂದ ಹೀಗೆ ಆಗುತ್ತದೆ ಎಂದು ಕೆಲವರು ಹೇಳಿದರೆ ಮನುಷ್ಯನನ್ನು ಮೋಸದಿಂದ ಭ್ರಮಿಸಲಾಗುತ್ತಿದೆ ಎಂದೂ ಕೆಲವರು ಹೇಳುತ್ತಾರೆ (Visual Illusion). ಅದೇನೇ ಆಗಲಿ, ಈ ಸ್ಥಳ ಬಹಳ ಮಜಾ ಕೊಡುತ್ತದೆ :).
ಇದಲ್ಲದೆ ಹಲವಾರು ಬಗೆಯ ಹೂತೋಟಗಳು, ಉದ್ಯಾನವನಗಳು, ವಿಶ್ರಾಂತಿ ಸ್ಥಳಗಳು ಎಲ್ಲಾ ನಗರಗಳಲ್ಲೂ ಕಂಡುಬರುತ್ತವೆ. ಇಲ್ಲಿರುವ ಸ್ವಚ್ಚತೆ, ಜೀವನ ಶೈಲಿ, ಜನರ ಪ್ರಾಮಾಣಿಕತೆ, ಶಿಸ್ತು ಕೊನೆಯದಾಗಿ ಡಾಲರ್ :) ಗಳನ್ನು ನೋಡಿ, ಹಲವು ಮಂದಿ ಇಲ್ಲೇ ಉಳಿದು ಬಿಡಲು ಬಯಸುತ್ತಾರೆ. ಆದರೆ ನನಗೆ ನಮ್ಮ ಬೆಂಗಳೂರಿನಷ್ಟು ಯಾವ ಊರೂ ಇಷ್ಟ ಆಗಲಿಲ್ಲ :). ಆದರೂ ಕೆಲವು ವರ್ಷ ಇದ್ದು $ ಸಂಪಾದನೆ ಮಾಡಲು ಕ್ಯಾಲಿಫೋರ್ನಿಯಾ ಸೂಕ್ತವಾದ ಸ್ಥಳ.
Bengalooriginta mundaje chennagilva?? :)
ReplyDeletebhava, nimma message ammange talupisuttini :)
Deletewant English version!!!! :)
ReplyDeleteChennagide pictures jote!
ReplyDelete