Tuesday, 1 May 2012

ಜೀವನ ಒಂದು ಸಂಜೆ ಆಟ :)

ಸಂಜೆ ಸುಮಾರು 6 ಘಂಟೆ. ಇನ್ನೇನು laptop ತೆಗೆದು ಬಾಗ್ನಲ್ಲಿ ಇಡೋ ಅಷ್ಟರಲ್ಲಿ boss ಬಂದು ಕೇಳ್ತಾರೆ, ಒಂದು file ಕಳಿಸೋಕೆ ಹೇಳಿದ್ನಲ್ಲ  ಇನ್ನು ಬಂದಿಲ್ಲ ಅಂತ. ಅತ್ತ ಆ file ಇನ್ನು ready ಆಗಿಲ್ಲ ಅಂತ  ಬಾಸ್ ಗೆ ಹೇಳಕ್ಕೂ ಆಗ್ತಾ ಇಲ್ಲ  ಇತ್ತ  internals ಗೆ ಲೇಟ್ ಆಗ್ತಾ ಇದೆ ಅಂತ ಹೇಳೋಕೆ ಫೋನ್  ಮಾಡ್ತಾ ಇರೋ friend ಫೋನ್ ತೆಗೆಯೋಕು ಆಗ್ತಾ ಇಲ್ಲ...
ಏನಪ್ಪ ಕುಯ್ತಾ ಇದ್ದಾನೆ ಅನ್ಕೊಂತಿದ್ದೀರ,  ಈ  ಬ್ಲಾಗ್  ಪೋಸ್ಟ್ ಸ್ವಲ್ಪ ಹಾಗೇನೆ. ಇದು evening college students ನ  ದೈನಂದಿಕ ಕಥೆ ವ್ಯಥೆ :)

ಆರಾಮಾಗಿ ಸ್ಕೂಲ್ ಮುಗಿಸಿ, dipoloma ಮುಗಿಸಿ, ಕೆಲಸಕ್ಕೆ ಸೇರಿದಾಗ, life ಅಂದ್ರೆ ಏನು ಅಂತನು ಸರಿಯಾಗಿ ಗೊತ್ತಿರಲಿಲ್ಲ, life ನಲ್ಲಿ ಇಷ್ಟೆಲ್ಲಾ ಕಷ್ಟ ಪಡಬೇಕಾಗಬಹುದು ಅಂತನೂ ಅನ್ಕೊಂಡಿರ್ಲಿಲ್ಲ. ಅದೇನೋ ಅಂತಾರಲ್ಲ, ಕಷ್ಟಾನೆ ಪಡದೋನು ಸುಖ ಹೇಗೆ ಅನುಭವಿಸುತ್ತಾನೆ ಅಂತ. ಅದಕ್ಕಾದ್ರೂ ಕಷ್ಟ ಪಡಲೇ ಬೇಕಿತ್ತು ಅಂತ ಹೇಳಿ. 
Office friends ಜೊತೆ  ಮಾತಾಡಿ, CET-counselling ಅಂತ ಓಡಾಡಿ, ದುಡ್ಡು-loan  ಅಂತ ತಿರುಗಾಡಿ, ಹಾಗೋ ಹೀಗೋ ಸರ್ಕಸ್ ಮಾಡಿ ಆಫೀಸ್ ನಿಂದ permission ತೊಗೊಂಡು join ಆಗಿಯೇ ಬಿಟ್ಟೆವು "Evening college" ಗೆ.

ನಾನು ಹೇಳ್ತಾ ಇರೋದು BMS Evening college of engineering ಬಗ್ಗೆ. ಬಸವನಗುಡಿ (Bull temple road) ನಲ್ಲಿ ಇರೋ ಈ college ನಲ್ಲಿ, ಸಂಜೆ ಸುಮಾರು  6 ರಿಂದ ರಾತ್ರಿ 9-10 ರ ವರೆಗೆ ಕ್ಲಾಸ್ ಇರ್ತಿತ್ತು. ಶುರುವಿನಲ್ಲಿ ಎಲ್ಲರಿಗೂ college attend ಆಗೋ ಆಸೆ. ಆದ್ರೆ ಕೆಲಸ ಮುಗಿಸಿ college ಗೆ ಬರೋ ಅಷ್ಟರಲ್ಲಿ ಟೈಮ್ ಆಗಿಯೇ ಬಿಡುತ್ತಿತ್ತು. ಕೆಲವರು class ಮುಗಿಯೋಕೆ ಇನ್ನೇನು 5 ನಿಮಿಷ ಇದೆ ಅನ್ಬೇಕಾದ್ರೆ ಕ್ಲಾಸ್ ಗೆ ಬಂದ್ರೆ ಇನ್ನು ಕೆಲವರು ಹೊರಗಡೆ college ಗೇಟ್ ಹತ್ರ ಏನ್ ಮಗಾ class ಆಗಿ ಹೋಯ್ತಾ ಅಂತ ಸಿಗ್ತಿದ್ರು. ಬೆಳಗ್ಗೆ 6 ಘಂಟೆಗೆ ಶುರುವಾದ ದಿನ ಮುಗಿಯುತ್ತಿದ್ದದು ರಾತ್ರಿ 11 ಘಂಟೆಗೆ. exam ಏನಾದ್ರು ಬಂತಂದ್ರೆ ನಿದ್ದೆಗೆ full stop. ಒಮ್ಮೆ ಒಬ್ಬರ ಮುಖ  ನೋಡಿದಮೇಲೆ ಮತ್ತೆ ಅವರು ಕಾಣಿಸ್ತಾ ಇದ್ದದ್ದು ಒಂದು ಅಥವಾ ಎರಡು ವಾರದ ನಂತರಾನೆ ಅಥವಾ ನೇರ exam hall ನಲ್ಲೆ. College ನಲ್ಲಿ ಯಾರು ಯಾರು ಇದ್ದಾರೆ ಅಂತ ತಿಳ್ಕೊಳೋಅಷ್ಟರಲ್ಲೇ ಒಂದು semester ಮುಗಿದು ಹೋಗಿತ್ತು.

ಶನಿವಾರ ಬಂತಂದ್ರೆ college ಗೆ ಹೋಗೋಕೆ ಏನೋ ಒಂಥರಾ ಖುಷಿ, Day college ಅವರನ್ನ ನೋಡಬಹುದಲ್ಲ ಅದಕ್ಕೆ ;). ಕೆಲವೊಮ್ಮೆ day college students ನ ನೋಡಿ, ನಾವು ಇದನ್ನೆಲ್ಲಾ miss ಮಾಡ್ಕೊಂತ ಇದ್ದಿವಲ್ಲ ಅಂತ ಬೇಸರವಾದ್ರೆ,  ಮತ್ತೊಮ್ಮೆ, ಇವರ age ನಲ್ಲಿ ನಾವು ಇವರಿಗಿಂತ responsible ಆಗಿದ್ದೀವಿ ಅಂತ ಎದೆ ಉಬ್ಬುತ್ತಿತ್ತು. college ಮುಗಿದಮೇಲೆ ಕೆಲಸ ಹುಡುಕ ಬೇಕು ಅನ್ನೋ tension ಅಂತು ಇರಲಿಲ್ಲ, tension ಇದ್ದಿದ್ದಂದ್ರೆ college ಹೇಗೆ ಮುಗಿಸೋದು ಅಂತ :D. ಹೇಗೋ ಒದ್ದಾಡಿ 3 ವರ್ಷದ college ಎಂಬ ಜೈಲು ಶಿಕ್ಷೆ ಮುಗಿಸಿ ಬಿಟ್ಟೆವು.

ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ. ತಮ್ಮದೇ ರೀತಿಯ ನಮಸ್ಯೆಯಿಂದ, college ಗೆ ಹೋಗೋ ಸಮಯದಲ್ಲಿ ಕೆಲಸಕ್ಕೆ ಸೇರಿ, ಜವಾಬ್ದಾರಿಯನ್ನ  ತಲೆ ಮೇಲೆ ಹೊತ್ಕೊಂಡು, professional life ಎಂಬ ಬಾವಿಗೆ ಬಿದ್ದು, ಒದ್ದಾಡಿ ಈಜಾಡಿ ಮೇಲೆದ್ದು ಇವಿನಿಂಗ್ college ನಲ್ಲಿ engineering ಮುಗಿಸಿದವರಿಗೆ ನನ್ನದೊಂದು ದೊಡ್ಡ ಸೆಲ್ಯೂಟ್ :).


ಬಸವನಗುಡಿಯ ಕಡಲೆಕಾಯಿ ಪರಶೆ, ಕ್ಲಾಸ್ ಮುಗಿದ ಮೇಲೆ college ಗ್ರೌಂಡ್ ನಲ್ಲಿ ಕ್ರಿಕೆಟ್ ಆಡೋದು, ಕ್ಲಾಸ್ ನಲ್ಲಿ ಕುತ್ಕೊಂಡು ಆಫೀಸ್ ಬಗ್ಗೆ ಮಾತಾಡೋದು, college ಹತ್ರ ಬಸ್ಸಿಂದ ಇಳಿದು ಹಳ್ಳಿ ತಿಂಡಿಯಲ್ಲಿ ತಿಂಡಿ ತಿಂದು ಹಾಗೆ ಮನೆಗೆ ಹೋಗಿ ಬಿಡೋದು, semester ಮುಗಿದಕೂಡಲೇ trekking ಹೋಗೋದು, ಇದನ್ನೆಲ್ಲಾ ಎಂದಿಗೂ ಮರೆಯೋಕಾಗಲ್ಲ. ಇಂದು ಎಲ್ಲರು ಲೈಫ್ ನಲ್ಲಿ settle ಆಗಿ ಜೀವನವೆಂಬ ಹೋರಾಟದಲ್ಲಿ ಗೆದ್ದಿದ್ದಾರೆ. ಈ ಬ್ಲಾಗನ್ನು ನನ್ನ ಎಲ್ಲ evening college ಸ್ನೇಹಿತರಿಗಾಗಿ dedicate ಮಾಡ್ತೀನಿ  :) .